ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರ ಭಾರತ ಪ್ರವಾಸ — 2027

ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರ ಭಾರತ ಪ್ರವಾಸ 2027 - ಕಾರ್ಯಕ್ರಮದ ವಿಶೇಷ ಭಾವಚಿತ್ರ

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಳು ಈಗ ಪ್ರಾರಂಭವಾಗಿವೆ!

ಕಾರ್ಯಕ್ರಮದ ಬಗ್ಗೆ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಜೇಷನ್ ಫೆಲೋಶಿಪ್‌ನ (ವೈಎಸ್ಎಸ್/ಎಸ್‌ಆರ್‌ಎಫ್) ಗೌರವಾನ್ವಿತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು 2027ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬುದನ್ನು ತಿಳಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ.

ತಮ್ಮ ಭೇಟಿಯ ಸಂದರ್ಭದಲ್ಲಿ ಸ್ವಾಮೀಜಿಯವರು ಕೆಳಗೆ ನೀಡಿರುವಂತೆ, ಎರಡು ನಗರಗಳಲ್ಲಿ ವಿಶೇಷ ಒಂದು ದಿನದ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ:

  • ಜನವರಿ 24, ಭಾನುವಾರ: ಹೈದರಾಬಾದ್
  • ಫೆಬ್ರವರಿ 21, ಭಾನುವಾರ: ನೊಯ್ಡಾ

ಸ್ವಾಮೀಜಿಯವರ ಹಿಂದಿನ ಭೇಟಿಗಳ ಸಂದರ್ಭದಲ್ಲಿ ನಮ್ಮೆಲ್ಲರಿಗೂ ದೊರೆತ ಮಹಾನ್ ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಉನ್ನತಿಯನ್ನು ಸ್ಮರಿಸುತ್ತಾ, ಅವರ ಮುಂಬರುವ ಭೇಟಿಯನ್ನು ನಾವು ಸಂತೋಷದಿಂದ ಎದುರು ನೋಡುತ್ತೇವೆ. ಈ ಆಶೀರ್ವದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಎಲ್ಲಾ ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರನ್ನು ಪ್ರೀತಿಯಿಂದ ಆಹ್ವಾನಿಸುತ್ತೇವೆ.

ಹಿಂದಿನ ಭೇಟಿಗಳ ಮುಖ್ಯಾಂಶಗಳು

ಸ್ವಾಮೀಜಿಯವರ ಹಿಂದಿನ ಭೇಟಿಗಳ ಮಧುರ ಕ್ಷಣಗಳು ಮತ್ತು ಆಶೀರ್ವಾದಗಳನ್ನು ಮತ್ತೊಮ್ಮೆ ಮೆಲುಕು ಹಾಕಲು ಕೆಳಗಿನ ಕೊಂಡಿಗಳನ್ನು ವೀಕ್ಷಿಸುವಂತೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

ಛಾಯಾಚಿತ್ರ ಸಂಗ್ರಹಗಳು

ಹಿಂದಿನ ಕಾರ್ಯಕ್ರಮಗಳು

para-ornament

ಒಂದು ಪರಿವರ್ತನಾತ್ಮಕ ಅನುಭವ

2025 ರಲ್ಲಿ ಸ್ವಾಮೀಜಿಯವರ ಭೇಟಿಯ ಸಮಯದಲ್ಲಿ ನಡೆಸಲಾದ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಭಕ್ತರ ಕೆಲವು ಅನಿಸಿಕೆಗಳನ್ನು ಕೆಳಗೆ ಹಂಚಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು

ಕಾರ್ಯಕ್ರಮದ ವೇಳಾಪಟ್ಟಿ
  • ಜನವರಿ 24, ಭಾನುವಾರ: ಹೈದರಾಬಾದ್
  • ಫೆಬ್ರವರಿ 21, ಭಾನುವಾರ: ನೊಯ್ಡಾ

ಪ್ರತಿಯೊಂದು ಒಂದು ದಿನದ ಕಾರ್ಯಕ್ರಮದ ಸಂಭಾವ್ಯ ವೇಳಾಪಟ್ಟಿ ಈ ಕೆಳಗಿನಂತಿದೆ:

  • ಬೆಳಿಗ್ಗೆ 10:00ರಿಂದ ಮಧ್ಯಾಹ್ನ 01:00ರವರೆಗೆ — ಗೌರವಾನ್ವಿತ ಸ್ವಾಮೀಜಿಯವರೊಂದಿಗೆ ಮೂರು ಗಂಟೆಗಳ ಧ್ಯಾನ
  • ಮಧ್ಯಾಹ್ನ 02:30ರಿಂದ 03:30ರವರೆಗೆ — ಸಂಕೀರ್ತನ
  • ಸಂಜೆ 04:30ರಿಂದ 06:00ರವರೆಗೆ — ಸಂಜೆಯ ಧ್ಯಾನ
  • ಸಂಜೆ 06:20ರಿಂದ 07:30ರವರೆಗೆ — ಸ್ವಾಮಿ ಚಿದಾನಂದಜೀಯವರೊಂದಿಗೆ ಸತ್ಸಂಗ
ಕಾರ್ಯಕ್ರಮದ ಸ್ಥಳಗಳು

ಸ್ವಾಮೀಜಿಯವರ ಭೇಟಿಯ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವ ಹೈದರಾಬಾದ್ ಮತ್ತು ನೊಯ್ಡಾದ ಸ್ಥಳಗಳ ವಿವರಗಳು ಈ ಕೆಳಗಿನಂತಿವೆ:

ಹೈದರಾಬಾದ್

ದ ಅಡ್ರೆಸ್,
ವ್ಯಾಸ್ ನಗರ ರಸ್ತೆ,
ನರ್ಸಿಂಗಿ,
ಹೈದರಾಬಾದ್ – 500075
ತೆಲಂಗಾಣ

ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ

ನೊಯ್ಡಾ

ಯೋಗದಾ ಸತ್ಸಂಗ ಶಾಖಾ ಆಶ್ರಮ — ನೊಯ್ಡಾ
ಪರಮಹಂಸ ಯೋಗಾನಂದ ಮಾರ್ಗ
ಬಿ-4, ಸೆಕ್ಟರ್ 62
ನೊಯ್ಡಾ – 201307
ಗೌತಮ ಬುದ್ಧ ನಗರ
ಉತ್ತರ ಪ್ರದೇಶ

ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ

ನೋಂದಣಿ

ಹಣ ಪಾವತಿ:

  • ನೋಂದಣಿ ಶುಲ್ಕವು ಪ್ರತಿ ವ್ಯಕ್ತಿಗೆ ₹ 1,200. ಈ ಶುಲ್ಕವು ಊಟದ ವೆಚ್ಚವನ್ನು ಒಳಗೊಂಡಿರುತ್ತದೆ.
  • ಆದಾಗ್ಯೂ, ಭಕ್ತರು ಉಳಿಯಲು ಬಯಸುವ ದಿನಗಳ ಸಂಖ್ಯೆಯನ್ನು ಆಧರಿಸಿ ವಸತಿ ಸೌಲಭ್ಯವನ್ನು ಪಡೆಯಲು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ವಸತಿ ಶುಲ್ಕಗಳು ಈ ಕೆಳಗಿನಂತಿವೆ:
    • ಹೈದರಾಬಾದ್: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,000
    • ನೊಯ್ಡಾ: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,250
  • ನೊಯ್ಡಾ ಕಾರ್ಯಕ್ರಮಕ್ಕಾಗಿ ವಸತಿ ಕೋರುವ ಭಕ್ತರಿಗೆ ನೊಯ್ಡಾ ಆಶ್ರಮದ ಸುತ್ತಮುತ್ತ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು
    ವೈಎಸ್ಎಸ್ ನೊಯ್ಡಾ ಆಶ್ರಮದ ಒಳಗೆ ಯಾವುದೇ ವಸತಿ ಸೌಲಭ್ಯ ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ನೀವು ನೋಂದಣಿ ಶುಲ್ಕವನ್ನು ಪಾವತಿಸಲು ಕಷ್ಟಪಡುತ್ತಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ನೋಂದಣಿ ಮಾಹಿತಿ

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಳು ಈಗ ಪ್ರಾರಂಭವಾಗಿವೆ!

ಭಕ್ತರು ಆನ್‌ಲೈನ್ ವೈಎಸ್ಎಸ್ ಡಿವೋಟಿ ಪೋರ್ಟಲ್ ಮೂಲಕ, ವೈಎಸ್ಎಸ್ ಸಹಾಯವಾಣಿಗೆ ಕರೆ ಮಾಡುವ ಮೂಲಕ, ಅಥವಾ ಯಾವುದೇ ವೈಎಸ್ಎಸ್ ಆಶ್ರಮಕ್ಕೆ ಅಥವಾ ವೈಎಸ್ಎಸ್ ಹೈದರಾಬಾದ್ ಧ್ಯಾನ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು.

ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಈ ಕೆಳಗಿನಂತಿದೆ:

ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ:

ತ್ವರಿತ ಮತ್ತು ಸುಲಭ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿ.

ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:

ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ helpdesk@yssi.org ಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:

  • ನಿಮ್ಮ ಪೂರ್ಣ ಹೆಸರು
  • ವಯಸ್ಸು
  • ವಿಳಾಸ
  • ಇಮೇಲ್ ಮತ್ತು ದೂರವಾಣಿ ಸಂಖ್ಯೆ
  • ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್‌ ಸದಸ್ಯತ್ವ ಸಂಖ್ಯೆ)
  • ನೀವು ಬರುವ ಮತ್ತು ಹೊರಡುವ ಪ್ರಸ್ತಾವಿತ ದಿನಾಂಕಗಳು

ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವ ಪಾವತಿ ಕೊಂಡಿಯ ಮೂಲಕ ನೀವು ಮೊತ್ತವನ್ನು ಪಾವತಿಸಬಹುದು.

ಎಸ್‌ಆರ್‌ಎಫ್‌ ಭಕ್ತರಿಗಾಗಿ ನೋಂದಣಿ:

  • ಆಸಕ್ತ ಎಸ್‌ಆರ್‌ಎಫ್‌ ಭಕ್ತರು helpdesk@yssi.org ಗೆ ಇಮೇಲ್ ಕಳುಹಿಸುವ ಮೂಲಕ YSS ಸಹಾಯವಾಣಿಯನ್ನು ಸಂಪರ್ಕಿಸಲು ಮತ್ತು ಮೇಲೆ ತಿಳಿಸಿದ ಎಲ್ಲಾ ವಿವರಗಳನ್ನು ಒದಗಿಸಲು ವಿನಂತಿಸಲಾಗಿದೆ.
  • ಎಸ್‌ಆರ್‌ಎಫ್‌ ಭಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಸ್ಥಳದಲ್ಲಿ ಊಟ ಮಾಡಲು ಹಾರ್ದಿಕ ಸ್ವಾಗತ, ಆದರೆ ಕೆಳಗೆ ಹಂಚಿಕೊಳ್ಳಲಾದ ಯಾವುದೇ ಹೋಟೆಲ್‌ಗಳಲ್ಲಿ ತಮ್ಮದೇ ಆದ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅವರನ್ನು ವಿನಂತಿಸಲಾಗಿದೆ.
para-ornament

ದಯವಿಟ್ಟು ಗಮನಿಸಿ:

  • ನಿಮ್ಮ ನೋಂದಣಿ ಯಶಸ್ವಿಯಾದಾಗ, ಅದನ್ನು ಇಮೇಲ್ ಅಥವಾ ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ದೃಢೀಕರಿಸಲಾಗುವುದು. ನಿಮಗೆ ಆ ಅಧಿಸೂಚನೆ ತಲುಪದಿದ್ದಲ್ಲಿ , ದಯವಿಟ್ಟು ವೈಎಸ್ಎಸ್ ರಾಂಚಿ ಸಹಾಯವಾಣಿಗೆ (0651) 6655 555 ಕರೆ ಮಾಡಿ ಅಥವಾ (helpdesk@yssi.org) ಇಮೇಲ್ ಮೂಲಕ ಸಂಪರ್ಕಿಸಿ.
  • ನಿಮ್ಮ ನೋಂದಣಿ ದೃಢೀಕರಿಸಿದ ನಂತರ ನೀವು ಭಾಗವಹಿಸಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಬೇರೆ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.

 

  • ವೈಎಸ್ಎಸ್ / ಎಸ್‌ಆರ್‌ಎಫ್‌ ಭಕ್ತರು ಮಾತ್ರ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.
  • 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ.
  • ವಿವಿಧ ಸ್ಥಳಗಳಲ್ಲಿ ಲಭವಿರುವ ಮಿತಿಯಾದ ವಸತಿ ಸೌಲಭ್ಯಗಳಿಂದಾಗಿ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಖಚಿತಪಡಿಸಲಾಗುವುದು.
  • ಎರಡೂ ಸ್ಥಳಗಳಲ್ಲಿನ ಕಾರ್ಯಕ್ರಮಗಳಿಗೆ ಹಾಜರಾಗಲು ಆಸಕ್ತಿ ಹೊಂದಿರುವ ಭಕ್ತರು ಹಾಗೆ ಮಾಡಬಹುದು.
ವಸತಿ

ಹೈದರಾಬಾದ್ ಮತ್ತು ನೊಯ್ಡಾದ ಒಂದು ದಿನದ ಕಾರ್ಯಕ್ರಮಗಳಿಗಾಗಿ, ಭಕ್ತರು ಕಾರ್ಯಕ್ರಮದ ಹಿಂದಿನ ದಿನದ ಸಂಜೆ ಆಗಮಿಸಲು ಮತ್ತು ಕಾರ್ಯಕ್ರಮ ಮುಗಿದ ನಂತರದ ಬೆಳಿಗ್ಗೆಯವರೆಗೆ ಉಳಿಯಲು ಆಯ್ಕೆ ಮಾಡಬಹುದು. ವಸತಿ ಸೌಲಭ್ಯವನ್ನು ಪಡೆಯಲು ಬಯಸಿದರೆ, ಭಕ್ತರು ಉಳಿಯಲು ಬಯಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಹೆಚ್ಚುವರಿ ಶುಲ್ಕವಿರುತ್ತದೆ. ವಸತಿ ಶುಲ್ಕಗಳು ಈ ಕೆಳಗಿನಂತಿವೆ:

  • ಹೈದರಾಬಾದ್: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,000
  • ನೊಯ್ಡಾ: ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ ₹ 1,250


ನೊಯ್ಡಾ ಕಾರ್ಯಕ್ರಮಕ್ಕಾಗಿ ವಸತಿ ಕೋರುವ ಭಕ್ತರಿಗೆ ನೊಯ್ಡಾ ಆಶ್ರಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು.
ವೈಎಸ್ಎಸ್ ನೊಯ್ಡಾ ಆಶ್ರಮದ ಒಳಗೆ ಯಾವುದೇ ವಸತಿ ಸೌಲಭ್ಯ ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ದಯವಿಟ್ಟು ಗಮನಿಸಿ:

  • ಎರಡೂ ಸ್ಥಳಗಳಲ್ಲಿ ಲಭ್ಯವಿರುವ ಮಿತಿಯಾದ ವಸತಿ ಸೌಲಭ್ಯಗಳಿಂದಾಗಿ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಖಚಿತಪಡಿಸಲಾಗುವುದು.
  • ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಂಚಿಕೊಳ್ಳುವ ವಸತಿ ಒದಗಿಸಲಾಗುವುದು. ಕುಟುಂಬದ ಸದಸ್ಯರು ದಯವಿಟ್ಟು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಮತ್ತು ಸಿದ್ಧತೆ ಮಾಡಿಕೊಳ್ಳಿ.
  • ವಸತಿ ಅಥವಾ ಆಹಾರಕ್ಕಾಗಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಹತ್ತಿರದ ಹೋಟೆಲ್‌ಗಳ ಪಟ್ಟಿಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ಸ್ವಯಂಸೇವಕರು

ಯಾವಾಗಲೂ ಇರುವಂತೆ, ನೋಂದಣಿ, ವಸತಿ, ದೃಶ್ಯ-ಶ್ರಾವ್ಯ ವ್ಯವಸ್ಥೆ, ಭೋಜನ, ನೈರ್ಮಲ್ಯ, ಮಾರ್ಗದರ್ಶನ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಭಕ್ತ-ಸ್ವಯಂಸೇವಕರ ಅಗತ್ಯವಿರುತ್ತದೆ. ಈ ಕೆಲವು ಕ್ಷೇತ್ರಗಳಲ್ಲಿ, ಪ್ರತಿ ಕಾರ್ಯಕ್ರಮ ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಮುಂಚಿತವಾಗಿಯೇ ಸ್ವಯಂಸೇವಕರ ಅಗತ್ಯವಿರುತ್ತದೆ. ನೀವು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಬಯಸಿದರೆ, ದಯವಿಟ್ಟು ನೋಂದಣಿ ನಮೂನೆಯಲ್ಲಿ ಇದನ್ನು ಸೂಚಿಸಿ.

ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕ ವಿವರಗಳು

ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ – 834001
ಜಾರ್ಖಂಡ್

ಫೋನ್: (0651) 6655 555 (ಸೋಮ-ಶನಿ, ಬೆಳಿಗ್ಗೆ 9:00 – ಸಂಜೆ 4:30)
ಇಮೇಲ್: helpdesk@yssi.org

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ