ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಹಾಗೂ ಎಸ್‌ಆರ್‌ಎಫ್ ಉಪಾಧ್ಯಕ್ಷರಾದ ಸ್ವಾಮಿ ವಿಶ್ವಾನಂದ ಗಿರಿ ಅವರು, ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯ ನವೀಕರಣ ಮತ್ತು ಪುನರ್ನಿರ್ಮಾಣ ಯೋಜನೆಯ ಹಿಂದಿನ ದೃಷ್ಟಿಕೋನ ಮತ್ತು ಸ್ಫೂರ್ತಿಯನ್ನು ಅನಾವರಣಗೊಳಿಸುತ್ತಾ, ಪೂರ್ಣಗೊಂಡ ಯೋಜನೆಯ “ಮುನ್ನೋಟವನ್ನು” ಹಂಚಿಕೊಳ್ಳಲಿದ್ದಾರೆ; ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆದರದಿಂದ ಆಹ್ವಾನಿಸುತ್ತೇವೆ.
ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯನ್ನು (ಎಸ್‌ಆರ್‌ಎಫ್ ಮಾತೃ ಕೇಂದ್ರ) ಪರಮಹಂಸ ಯೋಗಾನಂದಜೀಯವರು 1925ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಸ್ಥಾಪಿಸಿದರು. ಇದು ಪ್ರಾಚೀನ ಕ್ರಿಯಾಯೋಗ ವಿಜ್ಞಾನವನ್ನು ಸಮಸ್ತ ಮಾನವಕುಲಕ್ಕೆ ಪಸರಿಸುವ ಅವರ ವಿಶ್ವ ಕಾರ್ಯಾಚರಣೆಯ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಕೇಂದ್ರವಾಗಿದೆ.
ಈ ಕಾರ್ಯಕ್ರಮವು ಸೆಪ್ಟೆಂಬರ್ 12, ಶನಿವಾರ ರಾತ್ರಿ 10:30 ಗಂಟೆಯಿಂದ ( ಭಾರತೀಯ ಕಾಲಮಾನ) ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ನೇರ ಪ್ರಸಾರವಾಗಲಿದೆ ಮತ್ತು ನಂತರವೂ ವೀಕ್ಷಿಸಲು ಲಭ್ಯವಿರುತ್ತದೆ.

















